ಎಸ್‌ಬಿಐ ಇಂದ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ 2024 – SBI Assistant Manager Recruitment 2024

 SBI Assistant Manager Recruitment 2024 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಗತ್ಯವಿರುವ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ವೇತನ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.


SBI Assistant Manager Recruitment 2024 : Details of Vacancies

ಹುದ್ದೆ : ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ [ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಸಿವಿಲ್), ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಇಲೆಕ್ಟ್ರಿಕಲ್), ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಫೈರ್)]


ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 169 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಹುದ್ದೆ ಹುದ್ದೆಗಳ ಸಂಖ್ಯೆ

ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಸಿವಿಲ್) : 43

ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಇಲೆಕ್ಟ್ರಿಕಲ್) : 25

ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಫೈರ್) : 101


ಶೈಕ್ಷಣಿಕ ಅರ್ಹತೆ :

• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಸಿವಿಲ್) – ಕನಿಷ್ಠ ಶೇ. 60% ಅಂಕಗಳೊಂದಿಗೆ ಸಿವಿಲ್ ಇಂಜಿನಿಯರಿಂಗ್ ಅರ್ಹತೆ ಹೊಂದಿರಬೇಕು.

• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಇಲೆಕ್ಟ್ರಿಕಲ್) – ಕನಿಷ್ಠ ಶೇ. 60% ಅಂಕಗಳೊಂದಿಗೆ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಅರ್ಹತೆ ಹೊಂದಿರಬೇಕು.

• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಫೈರ್) – ಬಿಇ (ಫೈರ್) ಅಥವಾ ಬಿಇ/ ಬಿ.ಟೆಕ್ (ಸೇಪ್ಟಿ & ಫೈರ್ ಇಂಜಿನಿಯರಿಂಗ್) ಅಥವಾ ಬಿಇ/ ಬಿ.ಟೆಕ್ (ಫೈರ್ ಟೆಕ್ನಾಲಜಿ & ಸೇಪ್ಟಿ ಇಂಜಿನಿಯರಿಂಗ್) ಅಥವಾ ಫೈರ್ ಸೇಪ್ಟಿಯಲ್ಲಿ 4 ವರ್ಷಗಳ ತತ್ಸಮಾನ ಪದವಿ ಹೊಂದಿರಬೇಕು.

ವಯೋಮಾನ : ದಿನಾಂಕ 01/10/2024ಕ್ಕೆ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಿರಬೇಕು.
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಸಿವಿಲ್) – ಗರಿಷ್ಠ 30 ವರ್ಷ
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಇಲೆಕ್ಟ್ರಿಕಲ್) – ಗರಿಷ್ಠ 30 ವರ್ಷ
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಫೈರ್) – ಗರಿಷ್ಠ 40 ವರ್ಷ

ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 48,480 ರಿಂದ ರೂ. 85,920 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

ಅನುಭವ : ಹುದ್ದೆಗಳಿಗೆ ನಿಗದಿತ ಕೆಲಸದ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ : ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಸಿವಿಲ್), ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಇಲೆಕ್ಟ್ರಿಕಲ್) ಹುದ್ದೆಗೆ ಆನ್‌ಲೈನ್‌ ಪರೀಕ್ಷೆ ಹಾಗೂ ಇಂಟರ್ಯಾಕ್ಷನ್, ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಫೈರ್) ಹುದ್ದೆಗೆ ಶಾರ್ಟ್ ಲಿಸ್ಟಿಂಗ್ & ಇಂಟರ್ಯಾಕ್ಷನ್ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.

ಹಂತ 2 : ಬ್ಯಾಂಕಿನ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.

ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.

ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).

ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ಅರ್ಜಿ ಶುಲ್ಕ :

• ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ಅಭ್ಯರ್ಥಿಗಳು – ರೂ. 750

• ಪ.ಜಾತಿ/ ಪ.ಪಂ./ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.

ಶುಲ್ಕ ಪಾವತಿಸುವ ವಿಧಾನ : ನಿಗದಿಪಡಿಸಿದ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ನವೆಂಬರ್ 22, 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 12, 2024

ಅರ್ಜಿ ಸಲ್ಲಿಸುವ ಲಿಂಕ್ :

NOTIFICATION: CLICK HERE 

APPLY NOW : CLICK HERE 


Post a Comment

0 Comments